Mysore
ಅಕ್ರಮವಾಗಿ ನಾಮಫಲಕ, ಲೈಸನ್ಸ್ ಪಡೆಯದ ಅಂಗಡಿ

ಸಾಲಿಗ್ರಾಮ ಪಟ್ಟಣದಲ್ಲಿ ಗಾಂಧಿ ವೃತ್ತದ ಬಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದ ಖಾಲಿ ನಿವೇಶನ 56/22 ಜಾಗಕ್ಕೆ ಕಾವೇರಿ ಎಲೆಕ್ಟ್ರಾನಿಕ್ಸ್ ಎಂಬ ಜಾಹಿರಾತು ನಾಮಫಲಕ ವನ್ನು ಅಕ್ರಮವಾಗಿ ಹಾಕಿರುತ್ತಾರೆ. ಹಾಗು ಕೆಲವು ದಿನಗಳ ಹಿಂದೆ ಹೊಸದಾಗಿ ಅಂಗಡಿಯನ್ನು ತೆರೆದಿರುತ್ತಾರೆ. ಆದರೆ ಕಾವೇರಿ ಎಲೆಕ್ಟ್ರಾನಿಕ್ಸ್ ಅಂಗಡಿ ತೆರೆಯಲು ಸಂಬಂಧಪಟ್ಟ ಗ್ರಾಮ ಪಂಚಾಯತಿ ಯಿಂದ ಯಾವುದೇ ಜನರಲ್ ಲೈಸೆನ್ಸ್ ಪಡೆದಿರುವುದಿಲ್ಲ, ಈ ರೀತಿ ಲೈಸೆನ್ಸ್ ಪಡೆಯದೆ ಮತ್ತು ಸರ್ಕಾರಿ ಜಾಗದಲ್ಲಿ ಜಾಯಿರಾತಿನ ನಾಮಫಲಕ ಹಾಕಲು ಹಾಗು ಅಂಗಡಿ ತೆರೆಯಲು ಯಾರದೇ ಅನುಮತಿ ಬೇಕಾಗಿಲ್ಲವೇನೋ ಎಂದು ಸಾರ್ವಜನಿಕ ವಲಯದಲ್ಲಿ ಕೂಗು ಕೇಳಿ ಬರುತ್ತಿದೆ.ಇದೆ ರೀತಿ ಮುಂದುವರಿದರೆ ಎಲ್ಲಿ ಪಂಚಾಯತಿ ವ್ಯಾಪ್ತಿಯ ಜಾಗ ಇದೆಯೋ ಅಲ್ಲಿ ಮತ್ತು ಅಂಗಡಿ ತೆರೆಯಲು ಯಾರದೇ ಅನುಮತಿ ಬೇಕಾಗಿಲ್ಲವೆನೋ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದಾರೆ. ಈಗಲಾದರೂ ಸಂಬಂಧ ಪಟ್ಟವರು ಯಾವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳುವರು ಎಂದು ಕಾದು ನೋಡಬೇಕಾಗಿದೆ.
ಅಂಗಡಿ ತೆರೆಯಲು ನಮ್ಮಲ್ಲಿ ಜನರಲ್ ಲೈಸನ್ಸ್ ಅನ್ನು ಕಡ್ಡಾಯವಾಗಿ ಪಡೆಯಬೇಕು, ಆದರೆ ಇವರು ಲೈಸೆನ್ಸ್ ಪಡೆಯದೆ ಅಂಗಡಿ ತೆರೆದಿರುತ್ತಾರೆ, ಮತ್ತು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗಕ್ಕೆ ಜಾಹಿರಾತು ನಾಮಫಲಕ ಹಾಕಿದ್ದಾರೆ. ಇದರ ವಿಷಯವಾಗಿ ನಾವು ನೋಟೀಸ್ ಜಾರಮಾಡಿದ್ದೇವೆ.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜು
ವರದಿ :ಎಸ್ ಬಿ ಹರೀಶ್ ಸಾಲಿಗ್ರಾಮ
Mysore
ದಲಿತರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಮೈಸೂರು: ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಗ್ರಾಮದಲ್ಲಿ ದಲಿತ ಮಹಿಳೆ ಮೇಲೆ ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ಕರ್ನಾಟಕ ವೀರಕೇಸರಿ ಪಡೆ ಪ್ರತಿಭಟಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸಿದ ಪಡೆಯ ಕಾರ್ಯಕರ್ತರು ದಲಿತರ ಮೇಲಿನ ಹಲ್ಲೇ ಘಟನೆಯನ್ನು ವಿರುದ್ಧ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ವೀರಕೇಸರಿ ಪಡೆಯ ಅಧ್ಯಕ್ಷ ಮಧುವನ ಚಂದ್ರು ಮಾತನಾಡಿ, ಎಚ್.ಡಿ.ಕೋಟೆ ತಾಲ್ಲೂಕಿನ ನಾಗನಹಳ್ಳಿ ಗ್ರಾಮದ ಕವಿತಾಬಾಯಿ ಮತ್ತು ಅವರ ವಿಕಲಚೇತನ ಪತಿ ರಾಯಪ್ಪರ ಮೇಲೆ ಸವರ್ಣೀಯರಾದ ವಿಜಯಕುಮಾರ್ ಮತ್ತು ಪತ್ನಿ ಕವಿತಾ ಮೇರಿ, ಮಗಳಾದ ಶಾಲಿನಿ, ಅಳಿಯ ಯೋಗೇಶ್ ನಿರಂತರವಾಗಿ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದಾಗಿಯೂ ಹಲ್ಲೆಗೊಳಗಾದವರಿಂದ ಅಟ್ರಾಸಿಟಿ ದೂರು ದಾಖಲಿಸಿಲ್ಲ. ಬದಲಿಗೆ ಹಲ್ಲೆಗೆ ಒಳಗಾದವರ ಮೇಲೆ ದೂರು ದಾಖಲಿಸಿದ್ದಾರೆಂದು ದೂರಿದರು.
ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ರೀತಿ ದೂರು ದಾಖಲಿಸಿ ಮುಂದಿನ ಕ್ರಮ ಜರುಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ರೂಪದ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು. ಬಸವರಾಜು, ಸಿದ್ದರಾಜು, ರಾಮನಾಯಕ, ರಾಜೇಶ್ವರಿ ಇನ್ನಿತರರು ಉಪಸ್ಥಿತರಿದ್ದರು.
Mysore
ವಾಜಮಂಗಲ ಗ್ರಾಮದಲ್ಲಿ ಅಂಬೇಡ್ಕರ್ ಬ್ಯಾನರ್ ಹರಿದ ಕಿಡಿಗೇಡಿಗಳು

ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಹರಿದ ಕಿಡಿಗೇಡಿಗಳು
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವಿರುವ ಬ್ಯಾನರ್ ಅನ್ನು ಕತ್ತರಿಸಿ ಅವಮಾನ ಮಾಡಿರುವ ಘಟನೆ ತಾಲ್ಲೂಕಿನ ವಾಜಮಂಗಲ ಗ್ರಾಮದಲ್ಲಿ ನಡೆದಿದೆ.
ವಾಜಮಂಗಲದಲ್ಲಿ ಗ್ರಾಮದಲ್ಲಿ ಏ.14 ರಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಆಚರಣೆ ವೇಳೆ ಗ್ರಾಮದ ಮುಖ್ಯ ರಸ್ತೆಯಲ್ಲಿ ಅಂಬೇಡ್ಕರ್ ಪ್ಲೆಕ್ಸ್ ಗಳನ್ನು ಹಾಕಲಾಗಿತ್ತು. ಕಿಡಿಗೇಡಿಗಳು ಶುಕ್ರವಾರ ರಾತ್ರಿ ವೇಳೆಯಲ್ಲಿ ಅಂಬೇಡ್ಕರ್ ಪ್ಲೆಕ್ಸ್ ಗಳನ್ನು ಹರಿದು ಅವಮಾನ ಮಾಡಿದ್ದಾರೆ.
ಅಂಬೇಡ್ಕರ್ ಅವರ ನಾಮ ಫಲಕದ ಮೇಲೆ ಚಪಲ್ಲಿ ನೇತು ಹಾಕಿ ಅಪಮಾನ ಮಾಡಿದ್ದಾರೆ.
ಗ್ರಾಮಸ್ಥರು ಸ್ಥಳದಲ್ಲೇ ಕುಳಿತು ಪ್ರತಿಭಟನೆ ಮಾಡಿದರು.
ಘಟನೆಯ ಸ್ಥಳಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಮಾತನಾಡಿ, ಈ ಘಟನೆಗೆ ಕಾರಣರಾದವರಿಗೆ ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆ ವಿಧಿಸಲಾಗುವುದು.
ಜಿಲ್ಲೆಯ ಬೇರೆ ಯಾವ ಕಡೆಯೂ ಸಹ ಈ ರೀತಿಯ ಘಟನೆ ಯಾಗದಂತೆ ಮುಂಜಾಗ್ರತಾ ಕ್ರಮ ವಹಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ದನ್, ತಹಶೀಲ್ದಾರ್ ಮಹೇಶ್ ಹಾಜರಿದ್ದರು.
Mysore
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ

ಎಚ್.ಡಿ.ಕೋಟೆ: 12 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಪಕ್ಕದ ಮನೆಯ 65 ವರ್ಷದ ವ್ಯಕ್ತಿ ಅತ್ಯಾಚಾರ ಮಾಡಿರುವ ಘಟನೆ ತಾಲ್ಲೂಕಿನ ಹಂಪಾಪುರ ಗ್ರಾಮದಲ್ಲಿ ಏ.11 ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಏ.11 ರಂದು ಗ್ರಾಮದ ಮರಿಗೌಡ ಎಂಬ ವ್ಯಕ್ತಿ ಬಾಲಕಿಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿದ್ದಾನೆ.
ಬಾಲಕಿ ಹೊಟ್ಟೆ ನೋವಿನಿಂದ ಬಳಲುತ್ತಿದ್ದನ್ನು ಗಮನಿಸಿದ ತಂದೆ ಮಗಳನ್ನು ವಿಚಾರಿಸಿದ್ದಾನೆ ಬಾಲಕಿ ನಡೆದ ಘಟನೆಯನ್ನು ತಂದೆ, ತಾಯಿಗೆ ಹೇಳಿದ್ದಾಳೆ.
ಆತಂಕಗೊಂಡ ಬಾಲಕಿಯ ತಂದೆ, ತಾಯಿ ಮಾನ ಮರ್ಯಾದೆ ಗೊಸ್ಕಾರ ಘಟನೆ ಬಗ್ಗೆ ಯಾರ ಹತ್ತಿರ ಹೇಳಿಕೊಂಡಿಲ್ಲಾ. ಆದರೆ ಸಂತ್ರಸ್ತ ಬಾಲಕಿ ಅತ್ಯಚಾರ ವ್ಯಕ್ತಿ ನೋಡಿದಾಗಲೆಲ್ಲಾ ಇವನನ್ನು ಸಾಯಿಸಿ ಎಂದು ಹೇಳುವುದನ್ನು ಗಮನಿಸಿದ ತಂದೆ ತಾಯಿ ಖುದ್ದು ಘಟನೆ ಬಗ್ಗೆ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶುಕ್ರವಾರ ಬೆಳಿಗ್ಗೆ ಹಾಲು ತರಲು ಮನೆಯಿಂದ ಹೊರಗೆ ಬಂದ ಅತ್ಯಾಚಾರ ಮಾಡಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಚ್.ಡಿ.ಕೋಟೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
-
Chamarajanagar22 hours ago
ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ
-
Mysore20 hours ago
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ : ಆರೋಪಿ ಬಂಧನ
-
Hassan24 hours ago
ಬಗರ್ ಹುಕುಂ ಸಾಗುವಳಿ ಮಂಜೂರಾತಿಯ ಸಭೆ
-
Kodagu20 hours ago
ಹುಲಿ ದಾಳಿಗೆ ಕರು ಬಲಿ
-
Kodagu22 hours ago
ಬಿರುನಾಣಿ ವ್ಯಾಪ್ತಿಯಲ್ಲಿ ಹುಲಿ ಸೆರೆಗೆ ಕಾರ್ಯಚರಣೆ
-
Chikmagalur24 hours ago
ಅಪ್ರಾಪ್ತನಿಂದ ದ್ವಿಚಕ್ರ ವಾಹನ ಚಾಲನೆ: ಪೋಷಕರಿಗೆ 25 ಸಾವಿರ ರೂ ದಂಡ.
-
Hassan24 hours ago
ಜನಿವಾರ, ಕಾಶೀ ದಾರ ತೆಗೆಸಿರುವುದು ಖಂಡನೀಯ
-
Mysore21 hours ago
ಆರ್. ರಘು ಅವರ ಎರಡು ಕೃತಿಗಳ ಲೋಕಾರ್ಪಣೆ