Connect with us

Chikmagalur

ಅಂಧರ ಬಾಳಿಗೆ ಬೆಳಕಾದ ಹೆಚ್ ಬಿ ಲಕ್ಷ್ಮಣ್

Published

on

ಮೂಡಿಗೆರೆ : ಮೂಡಿಗೆರೆ ತಾಲೂಕು ಕಸಬಾ ಹೋಬಳಿ ಜೋಗಣ್ಣನಕೆರೆ ಅಬಚೂರು ಗ್ರಾಮದ ಹಿರಿಯ ಕಾಂಗ್ರೆಸ್ ಮುಖಂಡರಾದ ಹೆಚ್ ಬಿ ಲಕ್ಷ್ಮಣ್ (83 ವರ್ಷ) ಅವರು ಬುಧವಾರ ನಿಧನ ಹೊಂದಿದರು. ಅವರ ಅಂತ್ಯ ಸಂಸ್ಕಾರವು ಇಂದು ನಾಲ್ಕು ಗಂಟೆಗೆ ಗ್ರಾಮದಲ್ಲಿ ಅಪಾರ ಬಂಧು ಬಳಗದವರ ಸಮ್ಮುಖದಲ್ಲಿ ನೆರವೇರಲಿದೆ.

ಕಾಫಿ ಬೆಳೆಗಾರರಾದ ಹೆಚ್ ಬಿ.ಲಕ್ಷ್ಮಣ್ ಅವರು ರಾಜಕೀಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಗುರ್ತಿಸಿಕೊಂಡಿದ್ದರು ಅಷ್ಟೇ ಅಲ್ಲದೆ ಜೋಗಣ್ಣನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ದಾರದಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಇವರು ಸುದೀರ್ಘ ಸೇವೆಸಲ್ಲಿಸಿದ್ದರು. ಅಲ್ಲದೆ ಲಕ್ಷ್ಮಣ್ ರವರು ಜನಾನುರಾಗಿಯಾಗಿದ್ದರು ಯಾರೊಬ್ಬರನ್ನು ನಗುಮುಖದಿಂದಲೇ ಹೃದಯದಿಂದಲೇ ಮಾತನಾಡಿಸುವ ಸೌಮ್ಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು.

ನೇತ್ರದಾನ ಮಾಡಿ ಸಾವಿನಲ್ಲು ಸಾರ್ಥಕತೆ ಮೇರೆದ ಲಕ್ಷ್ಮಣ್

ಲಕ್ಷ್ಮಣ್ ಅವರು 83 ವರ್ಷಗಳ ಸುಧೀರ್ಘ ತುಂಬು ಜೀವನ ನಡೆಸಿದ ಇವರು ತಮ್ಮ ಜೀವಿತಾವಧಿಯಲ್ಲಿಯೇ ತನ್ನ ಸಾವಿನ ನಂತರ ತನ್ನ ಕಣ್ಣುಗಳನ್ನು ದಾನ ಮಾಡುವಂತೆ ಕುಟುಂಬದವರೊಂದಿಗೆ ಹೇಳಿದ್ದರು ಅವರು ತಮ್ಮ ಈ ಇಳಿವಯಸ್ಸಿನಲ್ಲಿಯು ಅವರ ಕಣ್ಣುಗಳು ಆರೋಗ್ಯಪೂರ್ಣವಾಗಿದ್ದವು ಕನ್ನಡಕ ಬಳಸದೆ ಪತ್ರಿಕೆ,ಪುಸ್ತಕಗಳನ್ನು ಸರಾಗವಾಗಿ ಓದುತ್ತಿದ್ದರು. ಕುಟುಂಬದವರ ಸೂಚನೆಯಂತೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ನರವಿನೊಂದಿಗೆ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ನೆನ್ನೆ ಸಂಜೆ ಮೃತರ ಮನೆಗೆ ಆಗಮಿಸಿದ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ನೇತೃ ತಜ್ಞರು ಅವರ ಎರಡು ಕಣ್ಣುಗಳನ್ನು ಸುರಕ್ಷಿತವಾಗಿ ತೆಗೆದು ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ ಎಂದು ಅವರ ತಮ್ಮನ ಮಗ ಗ್ರಾಮ ಪಂಚಾಯತಿ ಸದಸ್ಯರು ಆದ ಮಯೂರ್ ಮಾಹಿತಿ ನೀಡಿದ್ದಾರೆ. ಮೃತರು ತಮ್ಮ ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ.

ಕಣ್ಣುಗಳು ತಮ್ಮ ದೇಹದ ಪ್ರಮುಖ ಅಂಗವಾಗಿದ್ದು ಜೀವಿಯ ತನ್ನ ಸುತ್ತಮುತ್ತಲಿನ ಪರಿಸರದ ಜೊತೆಗೆ ಸಂಪರ್ಕವನ್ನು ಬೆಳೆಸಲು ಕಣ್ಣು ಪ್ರಮುಖ ಸಾಧನ ಕಣ್ಣಿನಂಥ ಅಪೂರ್ವವಾದ ಅಂಗವನ್ನು ವ್ಯಕ್ತಿಯು ಸತ್ತ ನಂತರ ಸುಟ್ಟು ಅಥವಾ ಹೂಳಿ ನಾಶ ಮಾಡುವ ಬದಲಿಗೆ ದಾನ ಮಾಡಿದರೆ ಇಬ್ಬರು ವ್ಯಕ್ತಿಗಳಿಗೆ ಉಪಕಾರವಾಗುತ್ತದೆ. ಲಕ್ಷ್ಮಣ್ ರವರ ದೇಹ ಅಳಿದರು ಅಂದರ ಬಾಳಿಗೆ ಬೆಳಕಾಗುವ ಮೂಲಕ ಆದರ್ಶ ಮೆರೆದಿದ್ದಾರೆ.

ವರದಿ : ಸಿ. ಎಲ್. ಪೂರ್ಣೇಶ್ ಚಕ್ಕೂಡಿಗೆ.

Continue Reading
Click to comment

Leave a Reply

Your email address will not be published. Required fields are marked *

Chikmagalur

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ )ಯಳಂದೂರು ತಾಲ್ಲೂಕು ಸಂತೆಮರಳ್ಳಿ ಕಾರ್ಯಕ್ಷೇತ್ರದ ಚುoಗಡಿಪುರ ಗ್ರಾಮದ ಶ್ರದ್ದಾ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮೇಳ ಸಿರಿ ಧಾನ್ಯಗಳ ಬಳಕೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.

Published

on

ಯಳಂದೂರು ಜೂನ್ 18

ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ )ಯಳಂದೂರು ತಾಲ್ಲೂಕು ಸಂತೆಮರಳ್ಳಿ ಕಾರ್ಯಕ್ಷೇತ್ರದ ಚುoಗಡಿಪುರ ಗ್ರಾಮದ ಶ್ರದ್ದಾ ಜ್ಞಾನವಿಕಾಸ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಮೇಳ ಸಿರಿ ಧಾನ್ಯಗಳ ಬಳಕೆ ಪ್ರಾತ್ಯಕ್ಷಿಕೆ ಹಾಗೂ ಮಾಹಿತಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.

ವಲಯದ ಮೇಲ್ವಿಚಾರಕರಾದ ಧನಪಾಲ್ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ಜ್ಞಾನವಿಕಾಸದಲ್ಲಿ ಇಂತಹ ಕಾರ್ಯಕ್ರಮದ ಪ್ರಾಮುಖ್ಯತೆ ಕುರಿತು ಪ್ರಸ್ಥವಿಕವಾಗಿ ತಿಳಿಸಿದರು ಹಾಗೆಯೇ ಪ್ರಗತಿಪರ ಕೃಷಿಕರು ಸಿರಿಧಾನ್ಯಗಳನ್ನು ಬೆಳೆಸಿ ಪೋಷಿಸುವ , ಆರೋಗ್ಯದ ದೃಷ್ಟಿಕೋನದಿಂದ ಪೌಷ್ಟಿಕ ಆಹಾರ ಸಿರಿಧಾನ್ಯ ಗಳ ಬಳಕೆ ಅನುಕೂಲ ಮತ್ತು ಈ ವರ್ಷ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ವರ್ಷ ಘೋಷಣೆ ಮಾಡಿರುವ ಪ್ರಾಮುಖ್ಯತೆ ಕುರಿತು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು. ತಾಲೂಕಿನ ಕೃಷಿ ಮೇಲ್ವಿಚಾರಕರಾದ ಶಿವಕುಮಾರ್ ಮೊಳಕೆ ಕಾಳು ಬಳಕೆ, ಸೊಪ್ಪು ತರಕಾರಿಗಳ ಕುರಿತು ಮಾಹಿತಿ ನೀಡಿದರು . ಇದೆ ವೇಳೆ ರಂಗೋಲಿ ಸ್ಪರ್ಧೆ ಹಾಗೂ ತಿಂಡಿಪದಾರ್ಥ ಜ್ಯೂಸ್ ಗಳ ಪ್ರದರ್ಶನ ಸ್ಪರ್ಧೆ ಬಹುಮಾನ ವಿತರಣೆ ನಡೆಸಲಾಯಿತು .
ಈ ಸಂದರ್ಭದಲ್ಲಿ ಶಾಲೆಯ ಮುಖ್ಯಪಾಧ್ಯಯರು ಮಣಿ , ಜ್ಞಾನವಿಕಾಸ ಸಮನ್ವಯಧಿಕಾರಿ ವಿನುತಾ ಶೆಟ್ಟಿ, ಸೇವಾಪ್ರತಿನಿಧಿ ಮಮತಾ, ಕೇಂದ್ರದ ಸದಸ್ಯರು ಉಪಸ್ಥಿತರಿದ್ದರು

Continue Reading

Chikmagalur

ಅಂಬಾ ತೀರ್ಥದಲ್ಲಿ ಸ್ನಾನಕ್ಕೆ ತೆರಳಿದ್ದ ಯುವಕ ನೀರು ಪಾಲು

Published

on

ಕಳಸದ ಅಂಬಾ ತೀರ್ಥದಲ್ಲಿ ಭಾನುವಾರ ಸ್ನಾನಕ್ಕೆಂದು ಇಳಿದಿದ್ದ ಯುವಕ ನೀರು ಪಾಲಾಗಿದ್ದು ಯುವಕನ ಮೃತದೇಹ ಸೋಮವಾರ ಮಧ್ಯಾಹ್ನ ಪತ್ತೆಯಾಗಿದೆ.
ಮುಳುಗಿರುವ ಯುವಕ ಸ್ಥಳೀಯ ಎಸ್ಟೇಟ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶದ ಸಾಗರ್ ( 19 ) ಎಂದು ಗುರುತಿಸಲಾಗಿದೆ.

ಭಾನುವಾರ ತೋಟಕ್ಕೆ ರಜಾ ಇದ್ದುದರಿಂದ ಅಂಬಾತೀರ್ಥದಲ್ಲಿ ಇಬ್ಬರು ಯುವಕರು ಸ್ನಾನಕ್ಕೆ ಇಳಿದಿದ್ದಾರೆ.ಈ ಸಂದರ್ಭದಲ್ಲಿ ಸಾಗರ್ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿತ್ತು.


ಭಾನುವಾರದಿಂದ ಅಂಬಾತೀರ್ಥದಲ್ಲಿ ಯುವಕನ ಮೃತದೇಹಕ್ಕಾಗಿ ಹುಡುಕಾಟ ನಡೆಸಲಾಗುತ್ತಿತ್ತು.ಸೋಮವಾರ ಮುಳುಗು ತಜ್ಞ ಮಲ್ಪೆ ಈಶ್ವರ್ ಮೃತದೇಹವನ್ನು ಮೇಲಕೆತ್ತಿದ್ದಾರೆ.
ಪ್ರಕರಣ ಕಳಸ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Continue Reading

Chikmagalur

ಚಿಕ್ಕಮಗಳೂರು : ವಿದ್ಯುತ್ ಶಾಕ್ ನಿಂದ 7ನೇ ತರಗತಿ ಬಾಲಕ ಸಾವಪ್ಪಿರುವ ದುರಂತ ಘಟನೆ

Published

on

ಕಡೂರು ತಾಲೂಕಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದ್ದು,ಆಕಾಶ್ (13) ಮೃತ ದುರ್ದೈವಿ
ಕಡೂರು ತಾಲೂಕಿನ ಕುಪ್ಪಾಳು ಗ್ರಾಮದ ಮೊರಾರ್ಜಿ ವಸತಿ ಶಾಲೆ ಆವರಣದ ನೇರಳೆ ಮರದಲ್ಲಿ ಹಣ್ಣು ಕೀಳಲು ಮರ ಹತ್ತಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ
ನೇರಳೆ ಹಣ್ಣು ಕೀಳಲು ಮೂವರು ವಿದ್ಯಾರ್ಥಿಗಳು ಮರ ಹತ್ತಿದ್ದರು
ಮರದಿಂದ ಜಾರಿ ಬೀಳುವಾಗ ವಿದ್ಯುತ್ ತಂತಿ ಹಿಡಿದ ಬಾಲಕ ವಿದ್ಯುತ್ ಶಾಕ್ ನಿಂದ ಕೆಳಗೆ ಬಿದ್ದ ಬಾಲಕನ ಆಸ್ಪತ್ರೆಗೆ ದಾಖಲು ಮಾಡಿದ್ದು,ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿ ಮೃತಪಟ್ಟಿದ್ದಾನೆ
ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Continue Reading

Trending

error: Content is protected !!